Faculty Development Programme

National Level Faculty Development Programme on Technology in Teaching Literature
Date:16 to 23 February 2026
The week-long Faculty Development Program, held from February 16 to February 23, 2026, in collaboration with the Department of Kannada, University of Mumbai, served as a landmark initiative in integrating modern technology with linguistic studies. Inaugurated by Prof. G.N. Upadhya, the program featured a distinguished panel of experts—including Beluru Sudarshana, T. G. Srinidhi, Dr. Praveen Kumar T.D., Meghana Sudhindra, and Madhu Y.N.—who provided practical demonstrations on how Artificial Intelligence and digital tools can revolutionize literature teaching and language development. By showcasing the synergy between technology and tradition, the sessions successfully illustrated how educators can foster student interest and utilize digital resources as a primary aid for academic research. The program concluded with a visionary address by G.N. Narasimhamurthy of the Kannada Ganaka Parishat, who emphasized the historical milestones of Kannada computing and outlined the collective responsibilities of experts, teachers, and students in advancing the language's digital future.

16/02/2026 ರಿಂದ 23/02/2026 ರವರೆಗೆ ನಡೆದ ಈ ಅಧ್ಯಾಪಕ ಅಭಿವೃದ್ದಿ ಕಾರ್ಯಕ್ರಮವು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ನಡೆಯಿತು. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರು ಕಾರ್ಯಕ್ರಮ ಕುರಿತು ಪಕ್ಷಿನೋಟದ ನುಡಿಗಳೊಂದಿಗೆ ಉದ್ಘಾಟಿಸಿದರು. ಮುಂದೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೇಳೂರು ಸುದರ್ಶನ (ಲೇಖಕರು ಮತ್ತು ಮುಕ್ತ ಜ್ಞಾನ ಅಭಿಯಾನಿ ಬೆಂಗಳೂರು), ಟಿ. ಜಿ. ಶ್ರೀನಿಧಿ (ನಂಪಾದಕರು, ಇಜ್ಞಾನ ಡಾಟ್ ಕಾಂ ಬೆಂಗಳೂರು), ಡಾ.ಪ್ರವೀಣ್‌ ಕುಮಾ‌ರ್ ಟಿ.ಡಿ. (ಸಹಾಯಕ ಪ್ರಾಧ್ಯಾಪಕರು ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ(ಕೇಂದ್ರಿಯ) ನಾಗರ, ಮಧ್ಯಪ್ರದೇಶ), ಮೇಘನ ಸುಧೀಂದ್ರ(ಲೇಖಕರು, ತಂತ್ರಜ್ಞರು ಬೆಂಗಳೂರು), ಮಧು ವೈ.ಎನ್.(ಲೇಖಕರು ಮತ್ತು ತಂತ್ರಜ್ಞರು ಬೆಂಗಳೂರು) ಪಾಲ್ಗೊಂಡು ಕೃತಕ ಬುದ್ದಿಮತ್ತೆ ಮತ್ತು ತಂತ್ರಜ್ಞಾನದ ವಿವಿಧ ಸಾಧನ, ಸೌಲಭ್ಯಗಳನ್ನು ಸಾಹಿತ್ಯ ಬೋಧನೆಯಲ್ಲಿ ಮತ್ತು ಕನ್ನಡ ಭಾಷೆಯನ್ನೂ ಬೆಳೆಸುವಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕುರಿತು ಆಸಕ್ತಿಯನ್ನು ಮೂಡಿಸಿ, ಅವನ್ನು ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಉತ್ತೇಜನವನ್ನು ನೀಡಬಹುದು ಎಂಬುದನ್ನು ನಿದರ್ಶನಗಳ ಮೂಲಕ, ಪ್ರಾತ್ಯಕ್ಷಿಕೆಗಳ ಮೂಲಕ, ವಿವರಿಸಿರುವುದು ಈ ಅರ್ಥಪೂರ್ಣ ಕಾರ್ಯಕ್ರಮದ ಸಫಲತೆಗೆ ಕಾರಣವಾಯಿತು. ಸಮಾರೋಪ ನುಡಿಗಳನ್ನಾಡಿದ ಜಿ.ಎನ್. ನರಸಿಂಹಮೂರ್ತಿ (ಕಾರ್ಯದರ್ಶಿ, ಕನ್ನಡ ಗಣಕ ಪ್ರತಿಷ್ಠಾನ) ಅವರು ಕನ್ನಡ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ, ನಡೆಯುತ್ತಿರುವ ಸಾಧನೆಗಳ ಪಕ್ಷಿನೋಟವನ್ನು ನೀಡುವುದರೊಂದಿಗೆ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.